ನಮ್ಮ ಪರಿಚಯ

ಮಾತೃಭೂಮಿ ಜನಸೇವಾ ಟ್ರಸ್ಟ್(ರಿ) R. No MDG-04-00081, ದಿನಾಂಕ 30/9/2022ರಂದು, ಕರ್ನಾಟಕ ಸಹಕಾರ ಸಂಘಗಳ ಕಾನೂನು ಪ್ರಕಾರ ನೋಂದಣಿಯಾಗಿದೆ. ನೋಂದಾಯಿತಾ ಕಚೇರಿ ಬಡವನಹಳ್ಳಿ, ಮಧುಗಿರಿ ತಾ. ತುಮಕೂರು ಜಿಲ್ಲೆಯಲ್ಲಿದೆ.


ಈ ಟ್ರಸ್ಟ್ ನ ಮುಖ್ಯ ಉದ್ದೇಶ ನಮ್ಮ ಸಮಾಜದಲ್ಲಿನ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳ ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿ, ಸಮಾಜದಲ್ಲಿನ ಅಸಮಾನತೆಯನ್ನು ನಿರ್ಮೂಲನೆ ಮಾಡಿ ಜನರಿಗೆ ಶಾಂತಿಯುತವಾಗಿ ಹಾಗೂ ನೆಮ್ಮದಿಯಾಗಿ ಜೀವನ ಮಾಡಲು ಒಂದು ಅವಕಾಶಮಾಡಿಕೊಡುವುದು.


"ಕುಟುಂಬ ಕೇಂದ್ರೀತ" ಪ್ರಜಾಪ್ರಭುತ್ವ ಆಡಳಿತ ವ್ಯವಸ್ಥೆಯನ್ನು ಜಾರಿಗೆ ತರುವ ಮೂಲಕ ಒಂದು "ಆದರ್ಶ ಸಮಾಜ"ವನ್ನು ನಿರ್ಮಿಸುವುದು ನಮ್ಮ ಜೀವಮಾನದ ಗುರಿ.


ಈ "ಆದರ್ಶ ಸಮಾಜ"ವನ್ನು ನಿರ್ಮಾಣ ಮಾಡಲು ಕರ್ನಾಟಕದಾದ್ಯಂತ ಸ್ವಯಂಸೇವಕರಾಗಿ ಕೆಲಸ ಮಾಡಲು ಆಸಕ್ತರು ನಮ್ಮನ್ನು ಸಂಪರ್ಕಿಸಿ.

ಧನ್ಯವಾದಗಳು
ಉದಯ ಶಿವ ಹಿಂದೂ

ನಮ್ಮ ಗುರಿ

ನಮ್ಮ ಗುರಿ ಒಂದೇ "ಆದರ್ಶ ಸಮಾಜ" ನಿರ್ಮಾಣ "ಕುಟುಂಬ ಸಂಘ"ಗಳ ತಳಹದಿಯಲ್ಲಿ.


👉 ಸ್ವಾಮಿ ವಿವೇಕಾನಂದ, ಅಣ್ಣ ಬಸವಣ್ಣ, ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್, ಬಾಬಾ ಸಾಹೇಬ್ ಅಂಬೇಡ್ಕರ್, ವೀರ ಸಾರ್ವರ್ಕರ್, ಸರ್ದಾರ್ ವಲ್ಲಭಾಯಿ ಪಟೇಲ್ ಇನ್ನೂ ಮುಂತಾದ ಮಹಾನ್ ಚೇತನಗಳ ಕನಸಿನ "ಆದರ್ಶ ಸಮಾಜ" ನಿರ್ಮಾಣ ನಮ್ಮ ಗುರಿ.

👉 ಸಮಾಜದಲ್ಲಿನ ಕುಟುಂಬಗಳ ಅಭಿವೃದ್ಧಿ ಮತ್ತು ವಿಶ್ವಾಸದ ಜೊತೆಗೆ "ಆದರ್ಶ ಸಮಾಜ" ನಿರ್ಮಾಣ ನಮ್ಮ ಗುರಿ.

👉 ಕುಟುಂಬಗಳು ನೀಡುವ ಮತದಾನ ಹಾಗೂ ತೆರಿಗೆ ಪಾವತಿ ಈ ಎರಡು ಮಾತ್ರವೇ ಇಡೀ ಪ್ರಜಾಪ್ರಭುತ್ವ ವ್ಯವಸ್ಥೆಗೆ ಆಧಾರ. ಆದ್ದರಿಂದ "ಕುಟುಂಬ ಕೇಂದ್ರೀತ" ಅಭಿವೃದ್ಧಿ ಮತ್ತು ಅಧಿಕಾರ ಹಂಚಿಕೆ ಮಾಡುವ ಮೂಲಕ ಜಾಗೃತ, ಸದೃಢ, ಧೈರ್ಯ ಸಾಹಸವಂತ, ಸಮ ಸಮಾಜದ "ಆದರ್ಶ ಸಮಾಜ" ನಿರ್ಮಾಣ ನಮ್ಮ ಗುರಿ.

👉 ಆರ್ಥಿಕ ಸಮಾನತೆ, ಧಾರ್ಮಿಕ ಸಮಾನತೆ, ಸಾಮಾಜಿಕ ಸಮಾನತೆ, ನಾಯಕತ್ವದ ಸಮಾನತೆಯ "ಆದರ್ಶ ಸಮಾಜ" ನಿರ್ಮಾಣ ನಮ್ಮ ಗುರಿ.


ಈ ಎಲ್ಲವನ್ನು ನಾವು ಮಾಡಿದರೆ ನಮ್ಮ ಸಮಾಜ ಸ್ವರ್ಗದಂತೆ ಕಂಗೊಳಿಸುತ್ತದೆ. ಆದರೇ ಇದನ್ನು ಮಾಡಲು ನಮ್ಮ ಸಮಾಜದಲ್ಲಿನ ಮನುಷ್ಯ ರೂಪಿ ಶಕುನಿ ತಂತ್ರದ ರಾಕ್ಷಸರು ಬಿಡುವುದಿಲ್ಲ. ನಮ್ಮನ್ನು ಯಾಮಾರಿಸಿ ನಮ್ಮ ನಮ್ಮಲ್ಲಿಹೆ ಕಿತ್ತಾಡುವಂತೆ ಮಾಡುತ್ತಾರೆ, ಹೆದರಿಸುತ್ತಾರೆ, ಬೆದರಿಸುತ್ತಾರೆ, ರಕ್ತ ಹರಿಸುತ್ತಾರೆ. ಸಮಾ, ದಾನ, ಭೇದ, ದಂಡ ಈ ಎಲ್ಲಾ ತಂತ್ರವನ್ನು ಅನುಸರಿಸುತ್ತಾರೆ. ಇದೆಲ್ಲವನ್ನು ನಾವು ತುಳಿದು "ಆದರ್ಶ ಸಮಾಜ" ಕಟ್ಟಿಕೊಳ್ಳಬೇಕು.


ಹೀಗೆ ಮಾಡಿದರೆ ಮಾತ್ರ ನಮ್ಮ ಮಕ್ಕಳು ಶಾಂತಿ ನೆಮ್ಮದಿಯಿಂದ ಬದುಕುತ್ತಾರೆ. ನಮ್ಮ ಜೊತೆ ಬನ್ನಿ "ಆದರ್ಶ ಸಮಾಜ" ನಿರ್ಮಾಣ ಮಾಡೋಣ. ಸ್ವಯಂ ಸೇವಕರಗಿ ಕೆಲಸ ಮಾಡಲು, ಈ ಮಣ್ಣಿನ ಋಣ ತೀರಿಸಲು, ಉತ್ತಮ ಸಮಾಜ ಕಟ್ಟಲು ಒಂದು ಕರೆ ಮಾಡಿ.

ಎಲ್ಲಾ ಸೇವೆಗಳನ್ನು ವೀಕ್ಷಿಸಿ

ಆಹಾರ ದಿನಬಳಕೆ ಮತ್ತು ಇತರೆ ವಸ್ತುಗಳು(Grocery And House Hold Product And Services) ವಿದ್ಯುತ್ ಗೃಹಪಯೋಗಿ ವಸ್ತುಗಳು ಮತ್ತು ಪಿಟೋಪಕಾರಣಗಳ ಮಳಿಗೆ(Electronics And Home appliances) ವ್ಯವಸಾಯ ಮತ್ತು ಪರಿಸರ ಅಭಿವೃದ್ಧಿಯ ಸೇವೆ ಮತ್ತು ಸೌಲಭ್ಯಗಳು(Agricultural And Nature Development And Other Service) ಸಿದ್ದ ಉಡುಪು ಮತ್ತು ವಸ್ತ್ರ ವಿನ್ಯಾಸ ಮಳಿಗೆ ಸೇವೆ ಮತ್ತು ಸೌಲಭ್ಯ. (Garments And Toiler Shops And Services). ಕಾನೂನು ಮತ್ತು ಸರ್ಕಾರಿ ಆಡಳಿತಾತ್ಮಕ ಸೇವೆ ಮತ್ತು ಸೌಲಭ್ಯಗಳು(Legal And Government Administrative Services) ವಾಹನ ಮತ್ತು ಸಾರಿಗೆಯ ಸೇವೆ ಮತ್ತು ಸೌಲಭ್ಯಗಳು(Vehicles And Transportation Services) ವೃತ್ತಿ ಪರ ವ್ಯಾಪಾರ, ವ್ಯವಹಾರ ಮತ್ತು ಕೈಗಾರಿಕಾಭಿವೃದ್ಧಿಯ ಸೇವೆ ಮತ್ತು ಸೌಲಭ್ಯಗಳು (Professional, Industrial, Factory Business And Other Service) ಗೃಹ ನಿರ್ಮಾಣ, ನಿರ್ವಹಣೆ ಸೇವೆ ಮತ್ತು ಸೌಲಭ್ಯಗಳು(Construction Services) ಅರೋಗ್ಯ ಮತ್ತು ಆಯಸ್ಸುವೃದ್ಧಿಯ ಸೇವೆ ಮತ್ತು ಸೌಲಭ್ಯಗಳು(Health And Lifestyle Development Services) ಶಿಕ್ಷಣ ಮತ್ತು ಸಂಸ್ಕಾರ ಕಲಿಕೆಯ ಸೇವೆ ಮತ್ತು ಸೌಲಭ್ಯಗಳು(Education And Culture Learning Services) ಸರ್ಕಾರಿ ನಾಗರೀಕ ಸೇವೆ ಮತ್ತು ಸೌಲಭ್ಯಗಳು(Government Citizens Services and Benefits) ಉದ್ಯೋಗ ಮತ್ತು ಕೌಶಲ್ಯಾಭಿವೃದ್ಧಿ ಸೇವೆ ಮತ್ತು ಸೌಲಭ್ಯಗಳು(Employment and Skill Development Services) ಭದ್ರತೆ ಮತ್ತು ರಕ್ಷಣೆಯ ಸೇವೆ ಮತ್ತು ಸೌಲಭ್ಯಗಳು (Security And Protection Services) ಸಾಮಾಜಿಕ ಹೊಣೆಗಾರಿಕೆ ಮತ್ತು ಅಭಿವೃದ್ಧಿ ನಿರ್ವಹಣೆ ಸೇವೆ ಮತ್ತು ಸೌಲಭ್ಯಗಳು(Social Responsibility And Development Services) ಸಂಶೋಧನೆಯ ಸೇವೆ ಮತ್ತು ಸೌಲಭ್ಯಗಳು(Research Services)